Home
WEL COME TO OFFICIAL WEBSITE OF TOWN MUNICIPAL COUNCIL HOOVINAHADAGALI
NATIONAL AWARDS FOR E-GOVERNANCE & BEST PRACTICES SYMPOSIM AND BEST URBAN LOCAL BODY
INTRODUCTION
ಪೀಠಿಕೆ:-
-
ಹೂವಿನಹಡಗಲಿ ಪಟ್ಟಣದ ಬಳ್ಳಾರಿ ಜಿಲ್ಲೆಯ ಒಂದು ತಾಲುಕು ಕೇಂದ್ರವಾಗಿದ್ದು, ವಿಶ್ವವಿಕ್ತಾತ ಹಂಪಿಗೆ 85 ಕಿ.ಮೀ. ಅಂತರದಲ್ಲಿದೆ.
-
ಹಿಂದೆ ಈ ಪಡ್ಟಣವು ಹೂವಿನ ಫಡಂಗಲ್ ಎಂದು ಕರೆಯಲ್ಪಡುತ್ತಿತ್ತು ಮತ್ತು ಮಲ್ಲಿಗೆ ಹೂವು ಕೃಷಿಗೆ ಪ್ರಸಿದ್ಧವಾಗಿದೆ.
-
ವಿಜಯನಗರ ಅರಸರ ಆಳ್ವಿಕೆಯಲ್ಲಿ ಮಲ್ಲಿಗೆ ಹೂವಗಳನ್ನು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತುಂಗಭದ್ರ ನದಿಯ ಮುಲಕ ಸರಬರಾಜು ಆಗುತ್ತಿದ್ದವು.
-
ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ, ಕೇಶವ ದೇವಸ್ಥಾನ, ಕೋಟೆ ಆಂಜಿನೇಯ ದೇವಸ್ಥಾನ, ಊರಮ್ಮ ದೇವಸ್ಥಾನ ಮತ್ತು ಗೋಣೆಬಸವೇಶ್ವರಗಳಂತಹ ಪ್ರಸಿದ್ಧ ದೇವಸ್ಥಾನಗಳು ಈ ಪಟ್ಟಣದ ಮಧ್ಯಭಾಗದಲ್ಲಿ ಇರುತ್ತವೆ.
-
ಹೂವಿನಹಡಗಲಿ ಪಟ್ಟಣದಲ್ಲಿ ರಾಯಭಾಗ ಉರುಸು ಜಾತ್ರೆಯು ಪ್ರತಿ ವರ್ಷವು ಏಳು ದಿನಗಳಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹಾಗೂ ಊರಮ್ಮ ಜಾತ್ರೆಯು ಪ್ರತಿ ಐದು ವರ್ಷಕ್ಕೆ(5) ಆಚರಿಸಲಾಗುತ್ತದೆ. ಈ ಪಟ್ಟಣದ ಪ್ರಸಿದ್ದ ಹಬ್ಬಗಳು ಆಗಿರುತ್ತವೆ
-
ಈ ತಾಲೂಕಿನಲ್ಲಿ ಜಾರುಗುವ ಪ್ರಸಿದ್ದ ದೇವಾಸ್ಥಾನಗಳೆಂದರೆ. ಶ್ರೀ ಮೈಲಾರ ಲಿಂಗೇಶ್ವರ ದೇವಾಸ್ಥಾನ (ಮೈಲಾರ). ಶ್ರೀ.ಕುರವತ್ತಿ ಬಸವೇಶ್ವರ ದೇವಾಸ್ಥಾನ. ಬೆಟ್ಟದ ಮಲ್ಲೇಶ್ವರ ದೇವಾಸ್ಥಾನ.ಹಿರೇಹಡಗಲಿ ಕಲ್ಲೇಶ್ವರ ದೇವಾಸ್ಥಾನ( ಹಿರೇಹಡಗಲಿ) ಈ ತಾಲೂಕಿನ ಪ್ರಸಿದ್ದ ದೇವಾಲಯಗಳು
-
ಪಟ್ಟಣವು ಜಿಲ್ಲಾ ಕೇಂದ್ರದ 166. ಕಿ.ಮೀ. ದೂರದ ಅಂತರದಲ್ಲಿರುತ್ತದೆ. ಪಟ್ಟಣಕ್ಕೆ ನೆರೆಯ ಜಿಲ್ಲೆಗಳಾದ ಗದಗ 64.ಕಿ.ಮೀ. ದಾವಣಗೇರಿ70.ಕಿ.ಮೀ. ಅಂತರದಲ್ಲಿರುತ್ತದೆ.
-
ಹಡಗಲಿ ಪಟ್ಟಣದಲ್ಲಿ ಪಿ. ಡಬ್ಲೂ.ಡಿ. ಹಾಗೂ ಜಡ್.ಪಿ. ಆಫೀಸ್ ಗಳು ತಲೂಕು ಕೇಂದ್ರದಲ್ಲಿ ಇರುತ್ತವೆ.
-
ಹಡಗಲಿ ಪಟ್ಟವು ಕೃಷಿಗೆ ಮೊಲಭೂತ ಉದ್ಯೋಗವಾಗಿರುತ್ತದೆ.
ಗಣಕೀರಣದ ಯೋಜನೆಗಳು
ಜನನ-ಮರಣ ಗಣಕೀಕರಣ : ಪುರಸಭೆ ಹೂವಿನಹಡಗಲಿಯ. ನಲ್ಲಿ ಲಭ್ಯವಿರುವ 1990 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ, ಸಾರ್ವಜನಿಕರು ಪುರಸಭೆ ಹೂವಿನಹಡಗಲಿಯ ವೆಬ್ಸೈಟ್ ನ ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು. ಅಧಿಕೃತ ಅಂತರ್ಜಾಲ : www.hoovinahadagalitown.gov.in
ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಬೆಳಿಗ್ಗೆ ಗಂ. 08-00 ರಿಂದ ಸಂಜೆ ಗಂ. 08-00 ರ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 08399-240227, ಅಧಿಕೃತ ಅಂತರ್ಜಾಲ : http://www.hoovinahadagalitown.gov.in/pgr/grievance-redressal.jsp
ಆಸ್ತಿ ತೆರಿಗೆ ಯೋಜನೆ : ಈ ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 23 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು.
ಸ್ಥಳೀಯಸಂಸ್ಥೆ ವೆಬ್ಸೈಟ್ : ಪುರಸಭೆ ಹೂವಿನಹಡಗಲಿಯ ಅಧಿಕೃತ ಅಂತರ್ಜಾಲ : www.hoovinahadagalitown.gov.in ಕೆ.ಎಂ.ಆರ್.ಪಿ. ಯೋಜನೆಯಡಿ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
ಲೆಕ್ಕ ಪದ್ದತಿ : ಪುರಸಭೆ ಹೂವಿನಹಡಗಲಿಯ ನಿಧಿಯಾಧಾರಿತ ಲೆಕ್ಕ ಪದ್ದತಿ (ಖರ್ಚು ವೆಚ್ಚಗಳು) ಡಿಸೆಂಬರ್ 2011 ರವರೆಗೆ ಕಾಲೋಚಿತಗಳಿಸಲಾಗಿದೆ. ಹಾಗೂ 2010-11 ಸಾಲಿನ ಎ.ಪಿ.ಆರ್. ಮುಕ್ತಾಯ ಗೊಂಡಿದ್ದು ಸದ್ರಿ ಮಾಹಿತಿ ಯನ್ನು ವೆಬ್ಸೈಟ್ : www.hoovinahadagalitown.gov.in ಮೂಲಕ ಪಡೆಯಬಹುದು.
This Page Maintained by Sri.G.PAMPAPATHI NAIK CHIEF OFFICER TMC HOOVINAHADAGALI
Page Council Members has been updated. Dated:15/03/2012

